ರಾಮಕುಂಜೇಶ್ವರ ಹೈಸ್ಕೂಲ್ (ಪುತ್ತೂರು ತಾಲೂಕು )-ವಿದ್ಯಾಥಿಗಳಿಂದ ಯಕ್ಷಗಾನ

ರಾಮಕುಂಜೇಶ್ವರ ಹೈಸ್ಕೂಲ್ (ಪುತ್ತೂರು ತಾಲೂಕು )-ವಿದ್ಯಾಥಿಗಳಿಂದ ಯಕ್ಷಗಾನ

 • June 6th, 2017

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ, ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ, ರಾಮಕುಂಜೇಶ್ವರ ಹೈಸ್ಕೂಲ್ (ಪುತ್ತೂರು ತಾಲೂಕು )ಇದರ ವಿದ್ಯಾಥಿಗಳಿಂದ ಯಕ್ಷಗಾನ ನಡೆಯಿತು

Read More
ಕೊನೆಯ ಸಪ್ತೋತ್ಸವ

ಕೊನೆಯ ಸಪ್ತೋತ್ಸವ

 • June 4th, 2017

04-06-2017ರಂದು ಶ್ರೀ ಕೃಷ್ಣ ಮಠದಲ್ಲಿ ಕೊನೆಯ ಸಪ್ತೋತ್ಸವವು ವಿಜೃಂಭಣೆಯಿಂದ ನಡೆಯಿತು. ತದನಂತರ ಚೂರ್ಣೋತ್ಸವ ನಡೆಯಿತು.

Read More
ಡಾ ನವೀನ್ ಭಟ್ ಸನ್ಮಾನ

ಡಾ ನವೀನ್ ಭಟ್ ಸನ್ಮಾನ

 • June 3rd, 2017

ಪರ್ಯಾಯ ಶ್ರೀ ಪೇಜಾವರ ಅಧೋಕ್ಷಜ ಮಠದ ವತಿಯಿಂದ ಶನಿವಾರ ರಾಜಾಂಗಣದಲ್ಲಿ ನಡೆದ ವಿಶೇಷ ಸಭಾ ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಡೆದ ಐ ಎ ಎಸ್ ಪರೀಕ್ಷೆಯಲ್ಲಿ 37 ನೇ ರಾಯ್‍ಂಕ್ ಪಡೆದ ತರುಣ ಸಾಧಕ ಡಾ ನವೀನ್ ಭಟ್ ಅವರನ್ನು ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸನ್ಮಾನಿಸಿದರು .

Read More
ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಅವರಿಗೆ ಶ್ರೀ ರಾಮ ಕೃಷ್ಣ ವಿಠಲಾನುಗ್ರಹ ಪ್ರಶಸ್ತಿ

ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಅವರಿಗೆ ಶ್ರೀ ರಾಮ ಕೃಷ್ಣ ವಿಠಲಾನುಗ್ರಹ ಪ್ರಶಸ್ತಿ

 • June 3rd, 2017

ಪರ್ಯಾಯ ಶ್ರೀ ಪೇಜಾವರ ಅಧೋಕ್ಷಜ ಮಠ ಶ್ರೀ ಕೃಷ್ಣ ಮಠದ ವತಿಯಿಂದ ಶನಿವಾರ ರಾಜಾಂಗಣದಲ್ಲಿ ನಡೆದ ವಿಶೇಷ ಸಭಾ ಕಾರ್ಯಕ್ರಮದಲ್ಲಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೈದರಾಬಾದಿನ ಸುಪ್ರಭಾತ ಹೋಟೆಲ್ ಸಮೂಹದ ಮುಖ್ಯಸ್ಥ ,ಕಲಾಪೋಷಕ ,ಧಾರ್ಮಿಕ ಸಾಂಸ್ಕೃತಿಕ ಧುರೀಣ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಅವರಿಗೆ ಶ್ರೀ ರಾಮ ಕೃಷ್ಣ ವಿಠಲಾನುಗ್ರಹ ಪ್ರಶಸ್ತಿ ನೀಡಿ ಸನ್ಮಾನಿಸಿದರು .

Read More
ಶ್ರೀ ಚಂದ್ರಶೇಖರ ನರಸಿಂಹ ದಾಸ್ ಅವರಿಗೆ ಶ್ರೀ ರಾಮ ಕೃಷ್ಣ ವಿಠಲಾನುಗ್ರಹ ಪ್ರಶಸ್ತಿ

ಶ್ರೀ ಚಂದ್ರಶೇಖರ ನರಸಿಂಹ ದಾಸ್ ಅವರಿಗೆ ಶ್ರೀ ರಾಮ ಕೃಷ್ಣ ವಿಠಲಾನುಗ್ರಹ ಪ್ರಶಸ್ತಿ

 • June 3rd, 2017

ಪರ್ಯಾಯ ಶ್ರೀ ಪೇಜಾವರ ಅಧೋಕ್ಷಜ ಮಠ ಶ್ರೀ ಕೃಷ್ಣ ಮಠದ ವತಿಯಿಂದ ಶನಿವಾರ ರಾಜಾಂಗಣದಲ್ಲಿ ನಡೆದ ವಿಶೇಷ ಸಭಾ ಕಾರ್ಯಕ್ರಮದಲ್ಲಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ,ಬಾಗಲಕೋಟೆಯ ಆರಾಧನಾ ಹೋಟೆಲ್ ಸಮೂಹದ ಮಾಲಕ ಧಾರ್ಮಿಕ ಮುಖಂಡ , ದಾನಿ ಶ್ರೀ ಚಂದ್ರಶೇಖರ ನರಸಿಂಹ ದಾಸ್ ಅವರಿಗೆ ಶ್ರೀ ರಾಮ ಕೃಷ್ಣ ವಿಠಲಾನುಗ್ರಹ ಪ್ರಶಸ್ತಿ ನೀಡಿ ಸನ್ಮಾನಿಸಿದರು.

Read More
ಎಸ್.ಎ. ಕೃಷ್ಣಯ್ಯ ಇವರಿಗೆ

ಎಸ್.ಎ. ಕೃಷ್ಣಯ್ಯ ಇವರಿಗೆ "ಕಡತ್ತಿಲ ಶ್ರೀ" ಪ್ರಶಸ್ತಿ

 • May 31st, 2017

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ಉಡುಪಿಯ ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರದ ಎಸ್.ಎ. ಕೃಷ್ಣಯ್ಯ ಇವರಿಗೆ ಹಂಡೆದಾಸ ಪ್ರತಿಷ್ಠಾನ (ರಿ) ಕಾರ್ಕಳ ಇವರಿಂದ ಕೊಡಲ್ಪಟ್ಟ "ಕಡತ್ತಿಲ ಶ್ರೀ" ಪ್ರಶಸ್ತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷರದ ನೀಲಾವರ ಸುರೇಂದ್ರ ಅಡಿಗ, ಉಡುಪಿ ತುಳುಕೂಟದ ಅಧ್ಯಕ್ಷರಾದ ಇಂದ್ರಾಳಿ ಜಯಕಾರ ಶೆಟ್ಟಿ, ಪ್ರತಿಷ್ಠಾನ ಅಧ್ಯಕ್ಷರಾದ ಶ್ರೀಮತಿ ರುಕ್ಮಿಣಿ ಹಂಡೆ, ಕಾರ್ಯದರ್ಶಿ ಅನಂತಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.

Read More
ಸಮಾಗಮ

ಸಮಾಗಮ

 • May 29th, 2017

ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರ ಹಾಗೂ ಅಷ್ಠ ಮಠಾಧೀಶರ ಉಪಸ್ಥಿತಿಯಲ್ಲಿ ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರ ಹಾಗೂ ಶ್ರೀ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಸಮಾಗಮ ನಡೆಯಿತು.

Read More
 ಸಿ.ಇ.ಟಿ. ಪೂರ್ವ ಸಮಾಲೋಚನೆ ಹಾಗು ವೃತ್ತಿಪರ ಮಾರ್ಗದರ್ಶನದ ಕಾರ್ಯಕ್ರಮ

ಸಿ.ಇ.ಟಿ. ಪೂರ್ವ ಸಮಾಲೋಚನೆ ಹಾಗು ವೃತ್ತಿಪರ ಮಾರ್ಗದರ್ಶನದ ಕಾರ್ಯಕ್ರಮ

 • May 28th, 2017

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ, ಶ್ರೀ ಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ ಮೆಂಟ್ ಬಂಟಕಲ್ ಇವರ ಸಹಯೋಗದೊಂದಿಗೆ ಸಿ.ಇ.ಟಿ. ಪೂರ್ವ ಸಮಾಲೋಚನೆ ಹಾಗು ವೃತ್ತಿಪರ ಮಾರ್ಗದರ್ಶನದ ಕಾರ್ಯಕ್ರಮವನ್ನು ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು ಉದ್ಘಾಟನೆ ಮಾಡಿ, ಇಂದಿನ ಕಾಲಘಟ್ಟದಲ್ಲಿ ಸ್ವಂತಲಾಭ ಮಾಡುವುದರೊಂದಿಗೆ ರಾಷ್ಟ್ರ ಪ್ರಗತಿಯನ್ನು ಮಾಡಬೇಕು. ತಾಂತ್ರಿಕ ಶಿಕ್ಷಣ ಹಾಗು ವೃತ್ತಿಪರ ಶಿಕ್ಷಣಗಳಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೆಚ್ಚಿನ ಮಹತ್ವ ಇದೆ. ಮಠಗಳು ಮಂತ್ರಜ್ಞಾನದೊಂದಿಗೆ ತಂತ್ರಜ್ಞಾನಕ್ಕೂ ಗಮನ ಹರಿಸಿದ್ದರಿಂದ ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರು ಸಣ್ಣ ವಯ್ಯಸ್ಸಿನಲ್ಲಿ ಗುರುಗಳಾದ ಮಧ್ವ ಹಾಗು ವಾದಿರಾಜರ ಹೆಸರಿನಲ್ಲಿ ವಿದ್ಯಾ ಸಂಸ್ಥೆಯನ್ನು ಸ್ಥಾಪಿಸಿ ಕಾರ್ಯಸಾಧನೆ ಮಾಡಿದ್ದಾರೆ . ಇಂದಿನ ಕಾರ್ಯಕ್ರಮದ ಮಾರ್ಗದರ್ಶನಗಳನ್ನು ವಿದ್ಯಾರ್ಥಿಗಳು ಪಡೆದುಕೊಂಡು ತಮ್ಮ ಹಾಗು ರಾಷ್ಟ್ರದ ಭವಿಷ್ಯವನ್ನು ರೂಪಿಸಬೇಕೆಂದು ಆಶೀರ್ವದಿಸಿದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರು, ಕಾಲೇಜಿನ ಪ್ರಾಂಶುಪಾಲರಾದ ತಿರುಮಲೇಶ್ವರ ಭಟ್ , ಮಾರ್ಗದರ್ಶನವನ್ನು ನೀಡಲು ಆಗಮಿಸಿದ ಸಿರಸಿಯ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬಾಲಚಂದ್ರ ಭಟ್ , ಸಂಸ್ಥೆಯ ಕಾರ್ಯದರ್ಶಿಯಾದ ರತ್ನಕುಮಾರ್ ಉಪಸ್ಥಿತರಿದ್ದರು . ರಮ್ಯಶ್ರೀ ಹಾಗು ಸೌಮ್ಯ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಬಾಲಚಂದ್ರ ಆಚಾರ್ ಸ್ವಾಗತಿಸಿದರು.

Read More