timeline_pre_loader
Timeline Of Pejavara Paryaya 2015-2016

TODAY'S PROGRAM

Sri Krishna Pooja  | October 23rd, 2017

ಶ್ರೀ ಕೃಷ್ಣ ದೇವರಿಗೆ 'ಮಾಧವ' ಅಲಂಕಾರ

October 23rd, 2017  | Sri Krishna Pooja

ಶ್ರೀ ಕೃಷ್ಣ ದೇವರಿಗೆ " ಶೋದಿಸೆನ್ನ ಭವದ ಕಲುಷ ಭೋದಿಸಯ್ಯ ಜ್ಞಾನವೆನೆಗೆ ಬಾಧಿಸುವ ಯಮನ ಬಾಧೆ ಬಿಡಿಸು 'ಮಾಧವ' ಅಲಂಕಾರ"

TODAY'S PROGRAM

Sri Krishna Pooja  | October 22nd, 2017

ಅರ್ಚನಾ ಭೋಜ್ ಬೆಂಗಳೂರ್ ಇವರಿಂದ ಭಕ್ತಿ ಸಂಗೀತ

October 22nd, 2017  | Daily Events & Cultural Program

ಶ್ರೀ ಕೃಷ್ಣ ಮಠದ ಮಧ್ವಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅರ್ಚನಾ ಭೋಜ್ ಬೆಂಗಳೂರ್ ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು.

"ಚಿಟ್ಟಾಣಿ ಯಕ್ಷಗಾನ ಸಪ್ತಾಹ - 2017 " ರ ಪ್ರಥಮ ದಿನದಂದು "ಪ್ರಮೀಳಾರ್ಜುನ - ಬಬ್ರುವಾಹನ "

Daily Events & Cultural Program  | October 22nd, 2017

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಶ್ರೀ ವೀರಾಂಜನೇಯ ಯಕ್ಷಮಿತ್ರ ಮಂಡಳಿ,ಬಂಗಾರಮಕ್ಕಿ ಮತ್ತು ಅತಿಥಿ ಕಲಾವಿದರ ಸಹಯೋಗದೊಂದಿಗೆ ಚಿಟ್ಟಾಣಿ ಅಭಿಮಾನಿ ಬಳಗ,ಉಡುಪಿ ಇವರು ಆಯೋಜಿಸುತ್ತಿರುವ "ಚಿಟ್ಟಾಣಿ ಯಕ್ಷಗಾನ ಸಪ್ತಾಹ - 2017 " ರ ಪ್ರಥಮ ದಿನದಂದು "ಪ್ರಮೀಳಾರ್ಜುನ - ಬಬ್ರುವಾಹನ " ಎಂಬ ಯಕ್ಷಗಾನ ಪ್ರಸಂಗ ನಡೆಯಿತು.

"ಚಿಟ್ಟಾಣಿ ಯಕ್ಷಗಾನ ಸಪ್ತಾಹ - 2017 "

October 22nd, 2017  | News & Events

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಶ್ರೀ ವೀರಾಂಜನೇಯ ಯಕ್ಷಮಿತ್ರ ಮಂಡಳಿ,ಬಂಗಾರಮಕ್ಕಿ ಮತ್ತು ಅತಿಥಿ ಕಲಾವಿದರ ಸಹಯೋಗದೊಂದಿಗೆ ಚಿಟ್ಟಾಣಿ ಅಭಿಮಾನಿ ಬಳಗ,ಉಡುಪಿ ಇವರು ಆಯೋಜಿಸುತ್ತಿರುವ "ಚಿಟ್ಟಾಣಿ ಯಕ್ಷಗಾನ ಸಪ್ತಾಹ - 2017 " ನ್ನು ಪರ್ಯಾಯ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಹಾಗೂ ಪೇಜಾವರ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನ ಶ್ರೀಪಾದರು ಉದ್ಘಾಟನೆ ಮಾಡಿ ಅನುಗ್ರಹ ಸಂದೇಶ ನೀಡಿದರು.ಈ ಸಂದರ್ಭದಲ್ಲಿ ಅಭ್ಯಾಗತರಾಗಿ ಮಂಗಳೂರು ವಿಶೇಷ ಆರ್ಥಿಕ ವಲಯದ ಮಾಜಿ ಪ್ರಧಾನ ವ್ಯವಸ್ಥಾಪಕರಾದ ಎಸ.ಟಿ.ಕರ್ಕೇರ ,ತಾಲ್ಲೂರ್ ಶಿವರಾಂ ಶೆಟ್ಟಿ ,ಗೋಪಿಕೃಷ್ಣ ರಾವ್ ಮುಂತಾದವರು ಭಾಗವಹಿಸಿದ್ದರು

TODAY'S PROGRAM

Sri Krishna Pooja  | October 21st, 2017

ಯುಜಿಸಿ,ನ್ಯಾಕ್ ನಿರ್ದೇಶಕರಾದ ಡಿ.ಪಿ.ಸಿಂಗ್ ರವರು ದಂಪತಿ ಸಮೇತ ಭೇಟಿ

October 21st, 2017  | Dignitaries Visit

ಶ್ರೀ ಕೃಷ್ಣ ಮಠಕ್ಕೆ ಸರಕಾರಿ ನವದೆಹಲಿಯ ಯುಜಿಸಿ,ನ್ಯಾಕ್ ನಿರ್ದೇಶಕರಾದ ಡಿ.ಪಿ.ಸಿಂಗ್ ರವರು ದಂಪತಿ ಸಮೇತ ಭೇಟಿ ನೀಡಿ, ದೇವರ ದರ್ಶನ ಮಾಡಿ, ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.

ಶ್ರೀಕೃಷ್ಣಬಾಲನಿಕೇತನದ ವಾರ್ಷಿಕೋತ್ಸವ ಸಮಾರಂಭ

News & Events  | October 21st, 2017

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಶ್ರೀ ಕೃಷ್ಣ ಸೇವಾಧಾಮ ಟ್ರಸ್ಟ್(ರಿ) ಇದರ ಅಂಗ ಸಂಸ್ಥೆಯಾದ ವಿ.ಕೆ.ಆರ್.ಆಚಾರ್ಯರ ಸ್ಮಾರಕ ಶ್ರೀಕೃಷ್ಣಬಾಲನಿಕೇತನದ ವಾರ್ಷಿಕೋತ್ಸವ ಸಮಾರಂಭದಲ್ಲಿ ಪರ್ಯಾಯ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹಾಗೂ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು. ಮುಖ್ಯ ಅತಿಥಿಗಳಾಗಿ ಉಡುಪಿ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ರವರು ಭಾಗವಹಿಸಿದ್ದರು .ಈ ಸಂದರ್ಭದಲ್ಲಿ ಹಿರಿಯ ಶ್ರೀಗಳವರು ನಿವೃತ್ತ ಪ್ರಾಂಶುಪಾಲ ಸಮಾಜಸೇವಕರಾದ ರಾಮಕುಂಜದ ಡಾ.ಅನಂತಕೃಷ್ಣ ಭಟ್ ರವರಿಗೆ ಬಾಲವಾತ್ಸಲ್ಯ ಸಿಂಧೂ ಪುರಸ್ಕಾರ ನೀಡಿ ಅಭಿನಂದಿಸಿದರು.

ವಿದ್ಯಾರ್ಥಿಗಳಿಂದ "ಗುರುದಕ್ಷಿಣೆ" ಎಂಬ ಯಕ್ಷಗಾನ

October 21st, 2017  | Daily Events & Cultural Program

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಶ್ರೀ ಕೃಷ್ಣ ಸೇವಾಧಾಮ ಟ್ರಸ್ಟ್(ರಿ) ಇದರ ಅಂಗ ಸಂಸ್ಥೆಯಾದ ವಿ.ಕೆ.ಆರ್.ಆಚಾರ್ಯರ ಸ್ಮಾರಕ ಶ್ರೀಕೃಷ್ಣಬಾಲನಿಕೇತನದ ವಿದ್ಯಾರ್ಥಿಗಳಿಂದ "ಗುರುದಕ್ಷಿಣೆ" ಎಂಬ ಯಕ್ಷಗಾನ ಪ್ರಸಂಗ ನಡೆಯಿತು.

TODAY'S PROGRAM

Sri Krishna Pooja  | October 20th, 2017

Mahapooja

Sri Krishna Pooja  | October 20th, 2017

ನೀಲಾವರದ ಗೋಶಾಲೆಯಲ್ಲಿ "ಗೋಪೂಜೆ"

October 20th, 2017  | News & Events

ನೀಲಾವರದ ಗೋಶಾಲೆಯಲ್ಲಿ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಗೋಗ್ರಾಸ ನೀಡಿ "ಗೋಪೂಜೆ" ನಡೆಸಿದರು.

ಮಾತಾ ಭಜನಾ ಮಂಡಳಿ , ಕುಬಣೂರು ಇವರಿಂದ ಭಜನಾ ಕಾರ್ಯಕ್ರಮ

Daily Events & Cultural Program  | October 20th, 2017

ಶ್ರೀ ಕೃಷ್ಣ ಮಠದ ಮಧ್ವಮಂಟಪದಲ್ಲಿ ಮಾತಾ ಭಜನಾ ಮಂಡಳಿ , ಕುಬಣೂರು ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಪ್ರಣೀತ ಬಳ್ಳಕ್ಕುರಾಯ ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ

October 20th, 2017  | Daily Events & Cultural Program

ಶ್ರೀ ಕೃಷ್ಣ ಮಠದ ಮಧ್ವಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರಣೀತ ಬಳ್ಳಕ್ಕುರಾಯ ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು.

ಮಧುಲಿಕಾ ಮತ್ತು ಬಳಗ ಬೆಂಗಳೂರು ಇವರಿಂದ ಭರತನಾಟ್ಯ

Daily Events & Cultural Program  | October 20th, 2017

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧುಲಿಕಾ ಮತ್ತು ಬಳಗ ಬೆಂಗಳೂರು ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.

TODAY'S PROGRAM

October 19th, 2017  | Sri Krishna Pooja

Alankara ( ವಜ್ರ ಕವಚ ಅಲಂಕಾರ)

Sri Krishna Pooja  | October 19th, 2017

Mahapooja

October 19th, 2017  | Sri Krishna Pooja

"ಬಲೀಂದ್ರ ಪೂಜೆ"

News & Events  | October 19th, 2017

ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿಯ ಅಮಾವಾಸ್ಯೆ ಪ್ರಯುಕ್ತ ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಮಠದ ಪುರೋಹಿತರಾದ ಚಿತ್ರಾಪುರ ಗೋಪಾಲಕೃಷ್ಣ ಆಚಾರ್ಯರು "ಬಲೀಂದ್ರ ಪೂಜೆ"ಯನ್ನು ನಡೆಸಿದರು. ಬಳಿಕ ಪಂಚ ದೀಪ ಪ್ರಜ್ವಲನೆ ಯೊಂದಿಗೆ ವಾದ್ಯ ಮೇಳ ಸಹಿತ ಕೃಷ್ಣ ಮಠದ ಎಲ್ಲಾ ಭಾಗಗಳಿಗೂ ದೀಪವನ್ನು ಪ್ರದರ್ಶಿಸಿ ಅಲ್ಲಿಂದ ಪೇಜಾವರ ಮಠದಲ್ಲಿಯೂ ಪ್ರದರ್ಶಿಸಿ ನಂತರ ಒಳ ಕೊಟ್ಟಾರದಲ್ಲಿ ದೀಪಗಳನ್ನು ಇಡಲಾಯಿತು.

ಭಕ್ತಿ ಸಂಗೀತ ಕಾರ್ಯಕ್ರಮ

October 19th, 2017  | Daily Events & Cultural Program

ಶ್ರೀ ಕೃಷ್ಣ ಮಠದ ಮಧ್ವಮಂಟಪದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ವೈಷ್ಣವಿ, ಮಂಗಳೂರು ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು.

TODAY'S PROGRAM

Sri Krishna Pooja  | October 18th, 2017

Mahapooja

Sri Krishna Pooja  | October 18th, 2017

ತೈಲ ಶಾಸ್ತ್ರ

October 18th, 2017  | News & Events

ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿಯ ಪ್ರಯುಕ್ತ " ತೈಲ ಶಾಸ್ತ್ರ " ವನ್ನು ಪರ್ಯಾಯ ಶ್ರೀ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಯವರು ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು , ಶ್ರೀ ವಿದ್ಯಾ ಸಾಗರ ತೀರ್ಥ ಸ್ವಾಮೀಜಿ (ಕೃಷ್ಣಾಪುರ ಮಠ) , ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ (ಕಾಣಿಯೂರು ಮಠ) ,ಶ್ರೀ ವಿಶ್ವವಲ್ಲಬತೀಥ೯ ಸ್ವಾಮೀಜಿ ( ಸೋದೆ ಮಠ ) ಅವರಿಗೆ ಶಾಸ್ತ್ರೋಕ್ತವಾಗಿ ನೆಡಸಲಾಯಿತು. ವಿಶೇಷವಾಗಿ ಹಿರಿಯ ಸ್ವಾಮೀಜಿಯಾರಾದ ಶ್ರೀ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಯವರಿಗೆ ಮಠದ ಪುರೋಹಿತರಾದ ವೇ. ಮೂ. ಗೋಪಾಲಕೃಷ್ಣ ಆಚಾರ್ಯರಿಂದ ಉಳಿದ ಸ್ವಾಜಿಯವರಿಗೆ ಮತ್ತು ಭಕ್ತಾದಿಗಳಿಗೆ ಪರ್ಯಾಯ ಸ್ವಾಮೀಜಿಯವರಿಂದ " ತೈಲ ಶಾಸ್ತ್ರ " ಶಾಸ್ತ್ರೋಕ್ತವಾಗಿ ನೆಡಯಿತು.

TODAY'S PROGRAM

Sri Krishna Pooja  | October 17th, 2017

Mahapooja

Sri Krishna Pooja  | October 17th, 2017

ಸರಕಾರಿ ಅಬಕಾರಿ ಆಯುಕ್ತರಾದ ಎಂ.ಮಂಜುನಾಥ ನಾಯಕ್ ದಂಪತಿಗಳು ಭೇಟಿ

October 17th, 2017  | Dignitaries Visit

ಶ್ರೀ ಕೃಷ್ಣ ಮಠಕ್ಕೆ ಸರಕಾರಿ ಅಬಕಾರಿ ಆಯುಕ್ತರಾದ ಎಂ.ಮಂಜುನಾಥ ನಾಯಕ್ ದಂಪತಿಗಳು ಭೇಟಿ ನೀಡಿ, ದೇವರ ದರ್ಶನ ಮಾಡಿ, ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.